ರಾಹುಲ್ ಪಿಎಂ ಆಗೋದು ಯಾವಾಗ ಈ ಯುವಕ ಮದ್ವೆಯಾಗೋದು ಯಾವಾಗ! ಪ್ರಧಾನಿ ಮೋದಿಯನ್ನೇ ಮದುವೆಯಾಗಬೇಕೆಂದು ಜೈಪುರದ ಮಹಿಳೆಯೊಬ್ಬರು ದೆಹಲಿಯಲ್ಲಿ ಧರಣಿ ಕೂತಿದ್ದ ಸುದ್ದಿಯನ್ನು ಕೆಲವು ದಿನಗಳ ಹಿಂದೆ ಬರೆದಿದ್ದೆವು, ಈಗ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಕಾಂಗ್ರೆಸ್ ವಲಯದಲ್ಲಿ ಯುವರಾಜ ಎಂದೇ ಕರೆಯಲ್ಪಡುವ ರಾಹುಲ್ ಗಾಂಧಿ ಸರದಿ!
ಅಭಿಮಾನಿಗಳು ತಮ್ಮ ನೆಚ್ಚಿನ ರಾಜಕೀಯ ನಾಯಕನಿಗಾಗಿ ಎಂತೆಂಥಾ ಅಭಿಮಾನ ತೋರಿಸುತ್ತಾರೆ ಎನ್ನುವುದನ್ನು ಕೇಳಿದ್ದೇವೆ.. ನೋಡಿದ್ದೇವೆ.. ಅದರೆ, ಇಲ್ಲೊಬ್ಬ ಯುವಕ ತಾನು ಮದುವೆಯಾಗಬೇಕಾದರೆ, ಅದೂ ಹೋಗ್ಲಿ ಕಾಲಿಗೆ ಚಪ್ಪಲಿ ಹಾಕೋಬೇಕಾದರೆ ಒಂದು ಷರತ್ತನ್ನು ತನಗೆ ತಾನೇ ವಿಧಿಸಿಕೊಂಡಿದ್ದಾನೆ.ರಾಹುಲ್ ಗಾಂಧಿ ಪ್ರಧಾನಿಯಾಗುವ ತನಕ ತಾನು ಮದುವೆಯಾಗುವುದಿಲ್ಲ, ಜೊತೆಗೆ ಪಾದರಕ್ಷೆಯನ್ನೂ ಧರಿಸುವುದಿಲ್ಲ ಎಂದು ಹರ್ಯಾಣ ಮೂಲದ ಪಂಡಿತ್ ದಿನೇಶ್ ಶರ್ಮಾ ಎನ್ನುವ 23ವರ್ಷದ ಯುವಕ ಶಪಥ ಮಾಡಿದ್ದಾನೆಂದು ನವಭಾರತ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.